ಪುರುಸೊತ್ತಾಗುವ ಹೊತ್ತು
ಅಜ್ಜಿ ತೀರಾ ಅನಾರೋಗ್ಯದಿಂದ ಬಳಲಿದ್ದರು. ಅವರಿವರನ್ನೆಲ್ಲ ನೋಡಬೇಕು ಅಂತ ಹಂಬಲಿಸಿ ಅಳುತ್ತಿದ್ದರು. ಏಳು ಮಂದಿ ಮಕ್ಕಳ ಪೈಕಿ ನಾಲ್ಕು ಜನ, ಇಪ್ಪತ್ತೊಂದು ಮಂದಿ ಮೊಮ್ಮಕ್ಕಳಲ್ಲಿ ಒಂದಿಬ್ಬರು ಹೋಗಿ ನೋಡಿ ಬಂದರು. ಎಲ್ಲರಿಗೂ ಅವರವರ ಕೆಲಸ; ಬಿಡುವಿಲ್ಲದ ದುಡಿಮೆ. ಅಯ್ಯೋ, ನೀ ಗ್ರೇಶಿದ ಹಾಗೆಲ್ಲ ಬರುವುದಕ್ಕೆ ನಮಗೆಂತ ಕೆಲಸ ಇಲ್ವಾ ಅಜ್ಜಿ ಅಂತ ಮನಸ್ಸಲ್ಲೇ ರೇಗಿದರು ಎಲ್ಲರೂ. ತಿಂಗಳಿಗೆ ಒಂದಿರುವ ಕ್ಯಾಶುವಲ್ ಲೀವ್ ಸುಮ್ಮನೇ ಅಜ್ಜೀನ ನೋಡಿ ಬರ್ಬೇಕು ಅಂತ ತೆಗಿಲಿಕ್ಕಾಗ್ತದಾ ಅಂತ ನಮ್ಮೊಳಗೇ ಎಗರಾಡಿಕೊಂಡೆವು. ಅಬ್ಬೆಗೆಂಥಾ ಮರ್ಲು, ಯಾವಾಗ್ಲೂ ಇರುವ ಮಕ್ಕಳು ಮೊಮ್ಮಕ್ಕಳೆಲ್ಲ ಹತ್ತಿರ ಬರ್ಲಿ ಅಂತ ಆಶೆ ಪಡುವುದು? ಅದೆಂಥಾ ಆಗುವ ಹೋಗುವ ಕೆಲಸವಾ? ಅಂತ ಗುರುಗುಟ್ಟಿಕೊಂಡೆವು.
ಒಂದಿನ ಅಜ್ಜಿ ಸಡನ್ನಾಗಿ ತೀರಿಕೊಂಡರು. ಎಲ್ಲರೂ ತರಾತುರಿಯಲ್ಲಿ ರಜೆ ಗೀಚಿ ಅಂತ್ಯಕ್ರಿಯೆಗೆ ಧಾವಿಸಿದೆವು. ಅಜ್ಜಿ ಬಯಸಿದ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳೆಲ್ಲ ಅಲ್ಲಿ ಜಮೆಯಾಗಿದ್ದೆವು. ಅದ ನೋಡುವುದಕ್ಕೆ ಮಾತ್ರ ಅಜ್ಜಿ ಕಣ್ತೆರೆಯಲಿಲ್ಲ...
ಒಂದಿನ ಅಜ್ಜಿ ಸಡನ್ನಾಗಿ ತೀರಿಕೊಂಡರು. ಎಲ್ಲರೂ ತರಾತುರಿಯಲ್ಲಿ ರಜೆ ಗೀಚಿ ಅಂತ್ಯಕ್ರಿಯೆಗೆ ಧಾವಿಸಿದೆವು. ಅಜ್ಜಿ ಬಯಸಿದ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳೆಲ್ಲ ಅಲ್ಲಿ ಜಮೆಯಾಗಿದ್ದೆವು. ಅದ ನೋಡುವುದಕ್ಕೆ ಮಾತ್ರ ಅಜ್ಜಿ ಕಣ್ತೆರೆಯಲಿಲ್ಲ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ