ಶಿರಸ್ತ್ರಾಣ ಪುರಾಣ... ನೂರೆಂಟು ಕಾರಣ...
[ಕೃಪೆ: ಪ್ರಜಾವಾಣಿ (ಮಂಗಳೂರು) ಜನವರಿ ೧೭, ೨೦೧೧]
ಮಂಗಳೂರಿಗೆ ಬಂದ ಹೊಸತು. ಇಲ್ಲಿನ ವಾಹನ ದಟ್ಟಣೆಗೇ ಅರ್ಧ ಧೈರ್ಯಗುಂದಿದ್ದ ನನಗೆ ಬೈಕ್ ಸವಾರರೆಲ್ಲಾ ಮುಖವೇ ಗುರ್ತು ಸಿಗದ ನಮೂನೆಯಲ್ಲಿ ಹೆಲ್ಮೆಟ್ಟು ಧರಿಸಿ ಹೋಗುವುದನ್ನು ನೋಡುವಾಗ ಯಾಕೋ ಅವ್ಯಕ್ತ ಭಯ; ಸಣ್ಣಗೆ ಕೈಕಾಲು ನಡುಕ. ಅದು ಸಾಲದ್ದಕ್ಕೆ ಆ ಥರ ಹೆಲ್ಮೆಟ್ಟು
ಹಾಕ್ಕೊಂಡವರು ಯಾರಾದರೂ ಹಾಯ್ ಬಾಯ್ ಮಾಡಿ ಹೋದರೆ ಕೇಳುವುದೇ ಬೇಡ. ಇಡೀ ದಿನ ಅದ್ಯಾರಾಗಿರಬಹುದಪ್ಪಾ ಅನ್ನುವ ಯೋಚನೆ. ಪರಿಚಯ ಇದ್ದವರೇಯಾ ಅಥವಾ ಯಾರೋ ಸುಮ್ಮನೆ ಕೀಟಲೆಗೆ ಅಂತ ಬಾಯ್ ಮಾಡಿ ಹೋದರಾ ಅನ್ನುವ ಕಿರಿಕಿರಿ. ಇದೇ ಮನಸ್ಥಿತಿಯಲ್ಲಿರಬೇಕಾದರೆ ಒಂದಿನ ತರಾತುರಿಯಲ್ಲಿ ಕಾಲೇಜಿಗೆ ಹೊರಟಿದ್ದೆ. ಬಸ್ಟಾಂಡಿನ ಹತ್ತಿರ ತಲುಪಬೇಕು ಅನ್ನುವಷ್ಟರಲ್ಲಿ ಭರ್ರನೇ ಬಂದ ಬೈಕೊಂದು ನನ್ನ ಹತ್ತಿರ ನಿಂತಿತು. ಹೆಲ್ಮೆಟ್ಟಿನೊಳಗಿಂದ ಬಾಯಿ ಕೊಂಚವೇ ಅಲುಗಾಡಿದ್ದು ಕಂಡಿತು ವಿನಾ ಅದ್ಯಾರೋ ಏನು ಹೇಳಿದರೋ ಒಂದೂ ಅರ್ಥವಾಗಲಿಲ್ಲ.
ನನ್ನ ಕಳವಳ ನಿಯಂತ್ರಣ ಮೀರಿ ’ಯಾರು, ಯಾರು ನೀವು?’ ಅಂತ ತೊದಲಿದೆ. ಅಷ್ಟರಲ್ಲಾಗಲೇ ಆ ವ್ಯಕ್ತಿಗೂ ನನ್ನ ಹೆದರಿಕೆ ಅರ್ಥವಾದಂತೆ ಹೆಲ್ಮೆಟ್ಟು ತೆಗೆದು ’ಎಂಥ ಮೇಡಮ್ ನೀವು? ಹೆದರಿಕೊಳ್ತೀರಿ? ನಾನು ನಿಮ್ಮ ಸ್ಟೂಡೆಂಟ್ ಅಲ್ವಾ?’ ಅಂತ ನಕ್ಕ. ’ಅಲ್ಲ ಮಾರಾಯಾ, ಮುಖವೇ ಕಾಣದಿರುವಾಗ ನೀನು ಯಾರು ಅಂತ ನಂಗೇನು ಗೊತ್ತಾಗಬೇಕು? ನಿನ್ನದೊಳ್ಳೇ ಕಥೆ.’ ಅಂದು ಮುಂದೆ ಹೋದೆ. ಬಸ್ಸು ಹತ್ತಿ ಕಾಲೇಜಿಗೆ ತಲುಪುವಷ್ಟರಲ್ಲಿ ನಾಲ್ಕಾರು ಸ್ಟೂಡೆಂಟ್ಸ್ ಸಾಲುಕಟ್ಟಿ ನಿಂತಿದ್ದರು. ’ಗ್ಲೆನ್ ಬೈಕ್ ನಿಲ್ಸಿದ್ರೆ ಹೆದರಿಕೊಂಡ್ರಂತೆ ಮೇಡಮ್... ಅಷ್ಟು ಹೆದ್ರಿಕೆ ಇರ್ಬಾರ್ದು ಮೇಡಮ್’ ಎಂಬ ಸಲಹೆ ಬೇರೆ. ಅಂತೂ ಈ ಘಟನೆ ಒಂದು ತಮಾಶೆಯೆಂಬಂತೆ ಕಾಲೇಜಿಡೀ ಸುದ್ದಿಯಾಯಿತು.
ಸರಕಾರ ಹೆಲ್ಮೆಟ್ಟು ಕಡ್ಡಾಯ ಅಂತ ನಿಯಮ ಮಾಡಿದ್ದೇ ಮಾಡಿದ್ದು, ಪೇಟೆ ತುಂಬಾ ತರಹೇವಾರಿ ಶಿರಸ್ತ್ರಾಣಗಳು. ಒಬ್ಬೊಬ್ಬರ ಹೆಲ್ಮೆಟ್ಟು ಒಂದೊಂದು ಬಗೆ. ತಲೆಯಲ್ಲಿ ಕೊಂಚ ಗಾಳಿಯಾಡಲಿ ಎಂದು ಬರೆ ಟೊಪ್ಪಿಯಂಥ ಹೆಲ್ಮೆಟ್ಟನ್ನೇ ಇಷ್ಟ ಪಡುವವರು ಕೆಲವರಾದರೆ ತಲೆಯೇನು, ಪೂರ್ತಿ ಮುಖವೇ ಕಾಣದ ಹಾಗೆ ಮುಚ್ಚಿಬಿಡುವಂಥ ಹೆಲ್ಮೆಟ್ಟೇ ಒಳ್ಳೇಯದು ಅನ್ನುವವರು ಕೆಲವರು. ಹೆಲ್ಮೆಟ್ಟು ತಯಾರಕರದೂ ಕೊಂಚ ಮಟ್ಟಿನ ಪಾರ್ಷಿಯಾಲಿಟಿ ಇದ್ದದ್ದೇ. ಪುರುಷರ ಹೆಲ್ಮೆಟ್ಟಿಗೂ ಮಹಿಳೆಯರ ಹೆಲ್ಮೆಟ್ಟಿಗೂ ಚೂರು ವ್ಯತ್ಯಾಸ. ಕೆಲವು ಮಂದಿ ಹೆಂಗಳೆಯರಿಗೂ ಯಾಕೋ ಗಂಡಸರು ಹಾಕ್ಕೊಳ್ಳುವಂಥಾ ಹೆಲ್ಮೆಟ್ಟೇ ಇಷ್ಟ. ಅಪ್ಪನ ಜತೆಗೋ ಅಮ್ಮನ ಜತೆಗೋ ಗಾಡಿಯಲ್ಲಿ ಶಾಲೆಗೆ ಹೋಗುವ ಪುಟಾಣಿಗಳಿಗೂ ಪುಟಾಣಿ ಹೆಲ್ಮೆಟ್ಟುಗಳು. ಆ ಮಕ್ಕಳಿಗೋ ಹೆಲ್ಮೆಟ್ಟು ಧರಿಸುವುದೆಂದರೆ ಒಂಥರಾ ಮೋಜು.
ಅಂದರೂ ನಮ್ಮಲ್ಲಿ ತುಂಬಾ ಜನಕ್ಕೆ ಶಿರಸ್ತ್ರಾಣವಿಲ್ಲದೇ ಹೋಗುವುದೆಂದರೆ ತುಂಬಾ ಇಷ್ಟ. ಹೆಲ್ಮೆಟ್ಟು ಇರುವುದರಿಂದಾಗುವ ಉಪಕಾರಕ್ಕಿಂತಲೂ ತಲೆಮೇಲೆ ಅದೊಂದು ಭಾರವಿಲ್ಲದೇ ಹಗುರಾಗಿ ಗಾಳಿಯಲ್ಲಿ ಓಡುವುದೆಂದರೇ ಪ್ರೀತಿ. ಹಾಗೆ ಹೋಗುವುದು ಅಪಾಯ ಅಂತ ಗೊತ್ತಿದ್ದರೂ ಸಮ. ಪೇಟೆಯ ಮಿತಿಯೊಳಗಂತೂ ಹೆಲ್ಮೆಟ್ ಇರಲೇಬೇಕೆಂಬ ಒತ್ತಡಕ್ಕೆ, ಅಲ್ಲಲ್ಲಿ ಸರ್ಕಲ್ಲುಗಳಲ್ಲಿ ಇರುವ, ಇರಬಹುದಾದ ಟ್ರಾಫಿಕ್ ಪೋಲೀಸರಿಗೆ ಹೆದರಿಯೋ ಅದಕ್ಕಿಂತಲೂ ಹೆಚ್ಚಾಗಿ ಸುಮ್ಮನೇ ಸಿಕ್ಕಿಬಿದ್ದರೆ ಫೈನು ಕಟ್ಟಬೇಕಲ್ಲಾ ಅನ್ನುವುದಕ್ಕಾಗಿ ಹೆಲ್ಮೆಟ್ ಹಾಕ್ಕೊಳ್ತಾರಷ್ಟೇ.
ಕೆಲವು ಮಂದಿ ಯುವಕರು ಹೆಲ್ಮೆಟ್ಟು ಧರಿಸುವ ರೀತಿ ಅವರಿಗೇ ಪ್ರೀತಿ. ತಲೆಮೇಲೆ ಕೂತಿದೆಯೋ ಇಲ್ಲವೋ ಎನ್ನುವ ಹಾಗೆ ಸ್ವಲ್ಪ ಮಟ್ಟಿಗೆ ಸಿಕ್ಕಿಸಿಕೊಂಡು ಭರ್ರನೇ ಬೈಕ್ ಓಡಿಸುತ್ತಾರೆ. ಅವರು ಹೋಗುವ ವೇಗಕ್ಕೆ ಆ ಹೆಲ್ಮೆಟ್ ಎಲ್ಲಾದರೂ ಗಾಳಿಗೆ ಹಾರಿಹೋದರೂ ಆಯ್ತು. ಸಿಗ್ನಲ್ಲಿಂದ ಸಿಗ್ನಲ್ಲಿಗೆ ತಲುಪುವಾಗಲೋ ಅಥವಾ ಟ್ರಾಫಿಕ್ ಪೋಲೀಸರು ಮುಂದೆ ಇದ್ದಾರೆ ಎಂಬ ಸುಳಿವು ಸಿಕ್ಕಿದರೋ ಸಾಕು, ಸರ್ರನೇ ಹೆಲ್ಮೆಟ್ಟನ್ನು ಸರಿಪಡಿಸಿಕೊಳ್ಳುತ್ತಾರೆ. ಸ್ವಲ್ಪ ಹೊತ್ತಿಗಷ್ಟೇ. ಮತ್ತೆ ಯಥಾಪ್ರಕಾರ ಹೆಲ್ಮೆಟ್ಟು ಸ್ವಸ್ಥಾನ ಸೇರುತ್ತದೆ. ಮೊಣಕೈಯ್ಯಲ್ಲಿ ನೇತಾಡಿಸಿಕೊಂಡರೂ ಆಯ್ತು. ಸಹಸವಾರನಿದ್ದರೆ ಹೆಲ್ಮೆಟ್ಟು ಸಲೀಸಾಗಿ ಅವನ/ಳ ಕೈ ಸೇರುತ್ತದೆ.
ಹೆಲ್ಮೆಟ್ಟು ಧರಿಸದೇ ಇರುವವರಿಗೆ ಅವರವರದೇ ಆದ ಕಾರಣಗಳೂ ಇವೆ ಬಿಡಿ. ಹೆಲ್ಮೆಟ್ಟು ಹಾಕ್ಕೊಂಡ್ರೆ ಈ ಬಿಸಿಲಲ್ಲಿ ಹೋಗುವಾಗ ತಲೆ ಓವನ್ ಒಳಗೆ ಇಟ್ಟ ಹಾಗಾಗ್ತದೆ ಅನ್ನುವಲ್ಲಿಂದ ಶುರು ಮಾಡಿ ನಂಗೆ ಮೊದಲೇ ತಲೆಕೂದಲು ಕಮ್ಮಿ. ಹೆಲ್ಮೆಟ್ಟಿದ್ದರಂತೂ ಕೇಳುವುದೇ ಬೇಡ. ಬೆವರುವ ಅವಸ್ಥೆಗೆ ಇದ್ದ ಕೂದಲೂ ಹೋದೀತು ಮಾರಾಯರೇ ಅನ್ನುವವರೇ ಹೆಚ್ಚು. ನೆತ್ತಿ ಬೋಳಾಗಿರುವವರ ಪಾಡಂತೂ ಹೇಳತೀರದು. ಹೆಲ್ಮೆಟ್ ಧರಿಸುವುದಕ್ಕೆ ಮೊದಲು ಕರ್ಚೀಫೊಂದನ್ನು ಅಚ್ಚುಕಟ್ಟಾಗಿ ತಲೆಗೆ ಸುತ್ತಿಕೊಳ್ಳಲೇ ಬೇಕು.
ಇವೆಲ್ಲ ಇರಲಿ. ಸ್ವಲ್ಪ ಮಟ್ಟಿಗಾದರೂ ಒಪ್ಪಬಹುದಾದ ನೆವನಗಳು. ಆದರೆ ಕೆಲವು ಜನರ ಕಾರಣಗಳೇ ಬೇರೆ. ಟ್ರಾಫಿಕ್ ಪೋಲೀಸು ನಿಲ್ಲಿಸಿದ ತಕ್ಷಣ ’ನಾನು ಪ್ರೆಸ್ಸಿನವನು’ ಅಂದರಾಯಿತು, ಗಡದ್ದಾಗಿ. ಆ ಪೋಲೀಸೂ ಅಷ್ಟೇ. ಪ್ರೆಸ್ ಎಂಬ ಪದಕ್ಕೇ ಸಿಕ್ಕಾಪಟ್ಟೆ ಇಂಪ್ರೆಸ್ ಆಗಿ ಕಾನೂನುಭಂಜಕನನ್ನು ಹಾಗೇ ಕಳುಹಿಸುವುದೂ ಇದೆ - ಯಾವುದೇ ಫೈನ್ ತೆಗೆದುಕೊಳ್ಳದೇ. ಪ್ರೆಸ್ಸಲ್ಲಿ ಕೆಲಸ ಮಾಡಿದ ತಕ್ಷಣ ಅವರ ತಲೆಯೇನು ಕಲ್ಲುಬಂಡೆಯದ್ದೋ, ಕಬ್ಬಿಣದ್ದೋ ಆಗುವುದಿಲ್ಲವಲ್ಲ! ಟಾರು ರಸ್ತೆಗೆ ಯಾವ ವೃತ್ತಿಯವನಾದರೇನು, ಬೀಸಿ ಬಿದ್ದರೆ ಮಂಡೆ ಶರ್ಬತ್ತೇ. ಆದರೂ ಕೆಲವು ಮಂದಿ ಪೇಪರಿನವರಿಗೆ ಅದೊಂದು ಸಲುಗೆ. ಮೇಲಾಗಿ ಅವರಿಗೆ ಒಂದಷ್ಟು ಪೋಲೀಸರ ಪರಿಚಯವಿದ್ದರೂ ಆಯ್ತು. ತೀರಾ ಗುರ್ತಿನವರಿಗೆ ಫೈನ್ ಹಾಕಲು, ಪಾಪ, ಪೋಲೀಸಿಗೂ ಮನಸ್ಸು ಬರುವುದಿಲ್ಲ. ಪ್ರೆಸ್ ಬಗ್ಗೆ ಜನರಲ್ಲಿ ಇರೋ ಗೌರವ, ಸಣ್ಣಮಟ್ಟಿನ ಭಯ ಇಂತಹ ಸಂದರ್ಭಗಳಲ್ಲಿ ದುರುಪಯೋಗವಾಗುವುದೇ ಹೆಚ್ಚು. ಇವರ ಕಥೆ ಹೀಗಾದರೆ ಇನ್ನುಳಿದ ಮಂದಿ ಬರಿದೇ ಲೊಟ್ಟೆ ಬಿಡುವುದೂ ಇದೆ. ಯಾವುದೇ ಟ್ರಾಫಿಕ್ ಪೋಲೀಸು ನಿಲ್ಲಿಸಲಿ, ನಾನು ಆ ಎಸ್ಸೈ ಕಸಿನ್, ಈ ಸರ್ಕಲ್ ಇನ್ಸ್‌ಪೆಕ್ಟರ್‌ನ ಚಿಕ್ಕಪ್ಪನ ಭಾವ, ಇನ್ನೊಬ್ಬ ಅಧಿಕಾರಿಯ ಕ್ಲೋಸ್ ಫ್ರೆಂಡ್ ಎಂಬಿತ್ಯಾದಿ ಡೈಲಾಗ್ ಹೊಡೆದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವವರು ಬಹಳ. ಆದರೆ ಈ ಸಂಬಂಧಗಳಿಗೂ ಹೆಲ್ಮೆಟ್ಟು ಧರಿಸದೇ ಇರುವುದಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ?!
ಹೆಲ್ಮೆಟ್ಟು ಕಡ್ಡಾಯ ಮಾಡುವುದರಲ್ಲಿ ಕಂಪೆನಿಗಳ ಲಾಬಿಯೇ ಹೆಚ್ಚು ಅನ್ನುವುದೊಂದು ಗುಲ್ಲು. ಒಮ್ಮೆ ಕಡ್ಡಾಯ ಅಂತ ಮಾಡ್ತಾರೆ, ಹೆಲ್ಮೆಟ್ಟುಗಳು ಸ್ಟಾಕ್ ಕ್ಲಿಯರ್ ಆದ ಮೇಲೆ ಅದೆಲ್ಲ ತಣ್ಣಗಾಗುತ್ತದೆ ಅಂತ ಅವರಿವರು ಗೊಣಗುತ್ತಾರೆ. ಅದರ ಹಿಂದಿನ ಮರ್ಮಗಳೇನೇ ಇರಲಿ, ತುಂಬಿತುಳುಕುವ ವಾಹನಗಳ ನಡುವೆ ನುಸುಳಿಕೊಂಡು ಹೋಗುವಾಗ, ಗಡಿಬಿಡಿಗಳ ನಡುವೆ ಗಾಡಿ ಓಡಿಸುವಾಗ ನಮ್ಮ ತಲೆಯಾದರೂ ಸುರಕ್ಷಿತವಾಗಿರಲಿ ಎಂಬ ಕಾರಣಕ್ಕಾದರೂ ನಮ್ಮ ಪಾಡಿಗೆ ನಾವು ಹೆಲ್ಮೆಟ್ಟು ಧರಿಸೋದೇ ಒಳ್ಳೇದಲ್ವಾ?

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ