ಪೋಸ್ಟ್‌ಗಳು

2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನೂರು ಮುಖ, ನೂರು ಬಗೆ, ಮೂರು ಗಾಲಿ ಸವಾರಿಗೆ...

ಇಮೇಜ್
[ಕೃಪೆ: ಪ್ರಜಾವಾಣಿ (ಮಂಗಳೂರು) ೨೪.೦೧. ೨೦೧೧] ಬಹುಶಃ ಪೇಟೆಯ ಬದುಕಲ್ಲಿ ನಮಗಿದು ಇತರ ಎಲ್ಲ ಅವಶ್ಯಕತೆಗಳ ಜತೆಗೆ ಬಹು ಮುಖ್ಯವಾಗಿ ಬೇಕಾದದ್ದು. ಸ್ಥಳ ಪರಿಚಯ ಇರುವಲ್ಲಿಗಾಗಲೀ, ಬರಿಯ ವಿಳಾಸವಷ್ಟೇ ಗೊತ್ತಿರುವಲ್ಲಿಗಾಗಲೀ ಎಲ್ಲಿಗೆ ಹೋಗಬೇಕಾದರೂ ನಮಗೆ ಸ್ವಂತ ವಾಹನವಿಲ್ಲವಾದಲ್ಲಿ ಇದೇ ಗತಿ. ಪೇಟೆಯ ಒಳಹೊರಗೆ ಎಲ್ಲೆಂದರಲ್ಲಿ ನೋಡಿದರೂ ಇದರ ಸಂಖ್ಯೆಯೂ ಬರೋಬ್ಬರಿ. ಅಂದರೂ ಯಾಕೋ ನಮಗೆ ಆಟೋರಿಕ್ಷಾಗಳೆಂದರೆ ಒಂದು ನಮೂನೆ ಸಸಾರ. ಎಲ್ಲರಿಗೂ ಬೇಕಾಗಿದ್ದರೂ ಬಳಸುವವರೆಲ್ಲರಿಂದ ದೂಷಣೆಗೊಳಗಾಗುವ ಸಾಮಾನ್ಯ ವಸ್ತುಗಳ ಪೈಕಿ ಆಟೋರಿಕ್ಷಾ ಗಳನ್ನೂ ಸೇರಿಸಬಹುದೇನೋ! ಈ ಆಟೋರಿಕ್ಷಾಗಳೂ ಅಷ್ಟೇ ಬಿಡಿ. ಬೈದಷ್ಟೂ ಬೈಸಿಕೊಳ್ಳುತ್ತವೆ, ಯಾವುದೇ ಮುಲಾಜಿಲ್ಲದೆ. ಹೆಚ್ಚಿನಂಶ ಯಾವಾಗಲೂ ಬೈಸಿಕೊಂಡು ಅದೇ ರೂಢಿಯಾಗಿರಬೇಕು. ಯಾರೇನೇ ಅಂದರೂ ಕ್ಯಾರೇ ಮಾಡದೇ ತಮ್ಮ ಪಾಡಿಗೆ ತಾವು ನುಸುಳಿಕೊಂಡು ಸಾಗುತ್ತಲೇ ಇರುತ್ತವೆ ಪೇಟೆಯುದ್ದಗಲಕ್ಕೂ. ಅತ್ತಲಿಂದ ಬಸ್ಸು ಬರಲಿ, ಇತ್ತಲಿಂದ ಲಾರಿ ಬರಲಿ, ಎದುರಿಂದ ಕಾರು ಬರಲಿ, ಹಿಂದಿನಿಂದ ಬೈಕು ಬರಲಿ ಇವು ಯಾರನ್ನೂ ಗಣ್ಯ ಮಾಡದೇ ಮುನ್ನುಗ್ಗುತ್ತಿರುತ್ತವೆ. ಎಲ್ಲಿ ಯಾವುದು ಢೀ ಕೊಟ್ಟೀತೋ ಹಿಂದಿನಿಂದ ಬಂದು ಹೊಡೆದೀತೋ ಎಂಬಿತ್ಯಾದಿಗಳ ಬಗ್ಗೆ ಯಾವುದೇ ಗಮನವಿಲ್ಲದೆ ಸಾಗುತ್ತಲೇ ಇರುತ್ತವೆ; ಮನೆಯೊಳಗೆ ಸದಾ ಗುಲ್ಲೆಬ್ಬಿಸುತ್ತಿರುವ ಸಣ್ಣ ಮಕ್ಕಳ ಹಾಗೆ. ಯಾವ ಊರಿನಲ್ಲೇ ಆಗಲಿ, ನೀವು ಗಮನಿಸಿ ನೋಡಿ, ರಿಕ್ಷಾಗಳು ಓಡುವುದು ಒಂದೇ...

ಶಿರಸ್ತ್ರಾಣ ಪುರಾಣ... ನೂರೆಂಟು ಕಾರಣ...

ಇಮೇಜ್
[ಕೃಪೆ: ಪ್ರಜಾವಾಣಿ (ಮಂಗಳೂರು) ಜನವರಿ ೧೭, ೨೦೧೧] ಮಂಗಳೂರಿಗೆ ಬಂದ ಹೊಸತು. ಇಲ್ಲಿನ ವಾಹನ ದಟ್ಟಣೆಗೇ ಅರ್ಧ ಧೈರ್ಯಗುಂದಿದ್ದ ನನಗೆ ಬೈಕ್ ಸವಾರರೆಲ್ಲಾ ಮುಖವೇ ಗುರ್ತು ಸಿಗದ ನಮೂನೆಯಲ್ಲಿ ಹೆಲ್ಮೆಟ್ಟು ಧರಿಸಿ ಹೋಗುವುದನ್ನು ನೋಡುವಾಗ ಯಾಕೋ ಅವ್ಯಕ್ತ ಭಯ; ಸಣ್ಣಗೆ ಕೈಕಾಲು ನಡುಕ. ಅದು ಸಾಲದ್ದಕ್ಕೆ ಆ ಥರ ಹೆಲ್ಮೆಟ್ಟು ಹಾಕ್ಕೊಂಡವರು ಯಾರಾದರೂ ಹಾಯ್ ಬಾಯ್ ಮಾಡಿ ಹೋದರೆ ಕೇಳುವುದೇ ಬೇಡ. ಇಡೀ ದಿನ ಅದ್ಯಾರಾಗಿರಬಹುದಪ್ಪಾ ಅನ್ನುವ ಯೋಚನೆ. ಪರಿಚಯ ಇದ್ದವರೇಯಾ ಅಥವಾ ಯಾರೋ ಸುಮ್ಮನೆ ಕೀಟಲೆಗೆ ಅಂತ ಬಾಯ್ ಮಾಡಿ ಹೋದರಾ ಅನ್ನುವ ಕಿರಿಕಿರಿ. ಇದೇ ಮನಸ್ಥಿತಿಯಲ್ಲಿರಬೇಕಾದರೆ ಒಂದಿನ ತರಾತುರಿಯಲ್ಲಿ ಕಾಲೇಜಿಗೆ ಹೊರಟಿದ್ದೆ. ಬಸ್ಟಾಂಡಿನ ಹತ್ತಿರ ತಲುಪಬೇಕು ಅನ್ನುವಷ್ಟರಲ್ಲಿ ಭರ್ರನೇ ಬಂದ ಬೈಕೊಂದು ನನ್ನ ಹತ್ತಿರ ನಿಂತಿತು. ಹೆಲ್ಮೆಟ್ಟಿನೊಳಗಿಂದ ಬಾಯಿ ಕೊಂಚವೇ ಅಲುಗಾಡಿದ್ದು ಕಂಡಿತು ವಿನಾ ಅದ್ಯಾರೋ ಏನು ಹೇಳಿದರೋ ಒಂದೂ ಅರ್ಥವಾಗಲಿಲ್ಲ. ನನ್ನ ಕಳವಳ ನಿಯಂತ್ರಣ ಮೀರಿ ’ಯಾರು, ಯಾರು ನೀವು?’ ಅಂತ ತೊದಲಿದೆ. ಅಷ್ಟರಲ್ಲಾಗಲೇ ಆ ವ್ಯಕ್ತಿಗೂ ನನ್ನ ಹೆದರಿಕೆ ಅರ್ಥವಾದಂತೆ ಹೆಲ್ಮೆಟ್ಟು ತೆಗೆದು ’ಎಂಥ ಮೇಡಮ್ ನೀವು? ಹೆದರಿಕೊಳ್ತೀರಿ? ನಾನು ನಿಮ್ಮ ಸ್ಟೂಡೆಂಟ್ ಅಲ್ವಾ?’ ಅಂತ ನಕ್ಕ. ’ಅಲ್ಲ ಮಾರಾಯಾ, ಮುಖವೇ ಕಾಣದಿರುವಾಗ ನೀನು ಯಾರು ಅಂತ ನಂಗೇನು ಗೊತ್ತಾಗಬೇಕು? ನಿನ್ನದೊಳ್ಳೇ ಕಥೆ.’ ಅಂದು ಮುಂದೆ ಹೋದೆ. ಬಸ್ಸು ಹತ್ತಿ ಕಾಲೇಜಿಗೆ ತಲುಪುವಷ್ಟರಲ್...