ಪೋಸ್ಟ್‌ಗಳು

ಹಬ್ಬಗಳ ಸಡಗರದಲ್ಲಿ ಮನಸ್ಸು ಹಗುರಾಗಲಿ!

ಪ್ರಜಾಪ್ರಗತಿ | 17 ಆಗಸ್ಟ್ 2020 ‘ರಾಜ್ಯದ ಎಲ್ಲ ಪ್ರಜೆಗಳೂ ಸುಖ ಸಮೃದ್ಧಿಗಳನ್ನು ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ಭೀತಿಯಾಗಲೀ, ನೋವಾಗಲೀ ಇಲ್ಲ. ಹಾಗಿದ್ದರೂ ಅವರು ಮನದಾಳದಲ್ಲಿ ಸಂತೋಷವಾಗಿಲ್ಲ. ಏಕೆಂದರೆ ರಾಜ್ಯದಲ್ಲಿ ಇತ್ತೀಚೆಗೆ ಯಾವುದೇ ಸಂಭ್ರಮವಾಗಲೀ, ಉತ್ಸವಗಳಾಗಲೀ ನಡೆದಿಲ್ಲ. ಜನರು ಒಂದು ಬಗೆಯ ಆಲಸ್ಯದಿಂದ ಬಳಲಿದ್ದಾರೆ. ಇದನ್ನು ನಿವಾರಿಸುವುದೂ ಕೂಡಾ ರಾಜನ ಕರ್ತವ್ಯವೇ ಆಗುತ್ತದೆ’ ಶ್ರೀರಾಮನ ಜನ್ಮದಿನದಂದು ಅವನಿಗೆ ಶುಭಾಶಯ ಹೇಳಿ ಮಂತ್ರಿಯಾದ ಸುಮಂತ್ರ ಹೇಳುವ ಮಾತುಗಳಿವು. ಅದಕ್ಕಾಗಿ ಶ್ರೀರಾಮ ರಾಜಸೂಯ ಯಾಗ ಮಾಡುವುದೆಂದು ಯೋಚಿಸಿದಾಗ ಅದು ಸೂಕ್ತವಲ್ಲ ಎಂದ ಭರತ ಲಕ್ಷ್ಮಣರು ಅಶ್ವಮೇಧ ಒಳಿತೆಂದು ಸೂಚಿಸುತ್ತಾರೆ. ಶ್ರೀರಾಮ ಸಂಕಲ್ಪ ಮಾಡುತ್ತಾನೆ. ಮುಂದೆ ಇದೇ ನೆಪವಾಗಿ ಲವಕುಶರನ್ನು ಕಾಣುವಂತಾಗುತ್ತದೆ ಎಂಬುದೆಲ್ಲ ಇತಿಹಾಸ.  ಹಾಗೆ ನೋಡಿದರೆ ಮನೆಮನೆಯ ಕತೆಯೂ ಅದೇ ಅಲ್ಲವೇ? ಎಲ್ಲವೂ ಇದೆ, ಮನಸ್ಸಿನಲ್ಲೇನೋ ಖಾಲಿತನ ಎಂಬುದು ಸಹಜವೇ. ಅದಕ್ಕಾಗಿಯೇ ಆಗೀಗ ಹಬ್ಬ ಹರಿದಿನಗಳ ಆಚರಣೆ. ಶ್ರಾವಣ ಮಾಸ ಬಂತೆಂದರೆ ಸಾಕು, ಮನೆಯೊಳಗಿನ ಸಡಗರ ಕೇಳಬೇಕೇ? ಆಶಾಢದ ಜಡವೆಲ್ಲ ತೊಲಗಿ ಹೊಸಹುಮ್ಮಸ್ಸಿನೊಂದಿಗೆ ಜನ ಅಣಿಯಾಗುತ್ತಾರೆ. ಭೀಮನ ಅಮವಾಸ್ಯೆ ಕಳೆದು ನಾಗರ ಪಂಚಮಿ, ವರಮಹಾ¯ಕ್ಷ್ಮೀ ವ್ರತ..ಇನ್ನೇನು ಗೌರಿ ಗಣೇಶ ಹಬ್ಬಕ್ಕೆ ದಿನಗಳು ದೂರವಿಲ್ಲ. ಕೊರೋನಾ ಇರಲಿ, ಇನ್ನೇನೇ ಆಗಲಿ ನಮ್ಮ ಜನರು ಎಲ್ಲವನ್ನೂ ಧಿಕ್ಕರಿಸಿ, ರೋಗದ ಭೀತಿಯನ್ನೂ

ಬದುಕಿನ ಸಂತೃಪ್ತಿಗೆ ಸರಳತೆಯೇ ಹೂರಣ!

ಜುಲೈ 11-18ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ ರಣಭೂಮಿಯಲ್ಲಿ ರಾಮನನ್ನು ಕಂಡು, ಅವನೊಂದಿಗೆ ಕಾದಾಡಿ ವೀರೋಚಿತ ಮರಣವನ್ನಪ್ಪಬೇಕೆಂಬ ಇಂಗಿತದಿಂದ ಬಂದವನನ್ನು ಎದುರಿಸುವುದು ಲಕ್ಷ್ಮಣ. ಅವನೇ ರಾಮನಿರಬಹುದೇ ಎಂಬ ಕೌತುಕ ಅತಿಕಾಯನಿಗೆ. ಅಂತೂ ಮನವೊಪ್ಪಿದ ದೇವರಿಗೆ ರಣಾಂಗಣದಲ್ಲಾದರೂ ಪೂಜೆ ಸಲ್ಲಿಸಬೇಕೆಂಬ ಆಶಯದಿಂದ ಅತಿಕಾಯ ಸರಳಪೂಜೆ ಸಲ್ಲಿಸುತ್ತಾನೆ. ಆ ಪೂಜೆ ಸರಳವೂ ಹೌದು, ಸರಳಿನದ್ದೂ (ಬಾಣದ್ದು) ಹೌದು. ಅತಿಕಾಯನ ಭಕ್ತಿಯ ದ್ಯೋತಕವಾದ ಆ ಬಾಣಗಳನ್ನು ಲಕ್ಷ್ಮಣ ತನ್ನ ಶರೀರದಲ್ಲಿ ಧರಿಸಿ, ಶ್ರೀರಾಮನ ಪದದಾಣೆಯಾಗಿಯೂ ನೀನು ಪರಮಭಕ್ತನಹುದು ಎಂದು ಮೆಚ್ಚಿಕೊಳ್ಳುತ್ತಾನೆ, ಅತಿಕಾಯನಿಗೆ ಅವನ ಅಪೇಕ್ಷೆಯಂತೆ ಮೋಕ್ಷವನ್ನೊದಗಿಸುತ್ತಾನೆ. ಮೂಲರಾಮಾಯಣದಲ್ಲಿ ಈ ಪ್ರಸಂಗವಿಲ್ಲದಿದ್ದರೂ ಯಕ್ಷಗಾನದಲ್ಲಿ ಇದು  ಜನಮೆಚ್ಚುಗೆಯ ಕಥಾನಕ. ಪೂಜೆಗೆ ನಿಜಕ್ಕೂ ಬೇಕಾಗಿರುವುದು ಭಗವಂತನಲ್ಲಿ ಅಚಲಭಕ್ತಿ ಮತ್ತು ಶ್ರದ್ಧೆ ಎಂಬುದನ್ನು ಸಾರುವ ಸಾವಿರಾರು ಕಥೆಗಳು ನಮ್ಮ ಪುರಾಣಗಳಲ್ಲಿ, ಇತಿಹಾಸದಲ್ಲಿವೆ. ಆಡಂಬರದ, ಸಿರಿವಂತಿಕೆಯ ಮದದ ಪೂಜೆಗೆ ಭಗವಂತನು ಒಲಿದ ನಿದರ್ಶನಗಳಿಂದಲೂ ಅನನ್ಯವಾದ ಮುಗ್ಧಭಕ್ತಿಗೆ ಒಲಿದು ಬಂದ ಉದಾಹರಣೆಗಳು ಹೆಚ್ಚು. ಮಹಾಭಾರತದಲ್ಲಿಯೂ ಕೂಡಾ ಸಂಧಾನಕ್ಕಾಗಿ ಹಸ್ತಿನಾವತಿಗೆ ಹೋದ ಕೃಷ್ಣ, ಅರಮನೆಯಲ್ಲಿ ಕೌರವ ತನಗಾಗಿ ವೈಭವೋಪೇತ ಅಡುಗೆಯನ್ನು ಮಾಡಿಸಿದ್ದರೂ ಉಣ್ಣುವುದಿಲ್ಲ. ರಾಜತಾಂತ್ರಿಕವಾದ ಕಾರಣಗಳು ಅದೇನೇ ಇದ್ದರೂ ಅವನ

ಆನ್ಲೈನ್ ಶಿಕ್ಷಣ: ಬದಲಾದೀತೇ ಸಾಮರ್ಥ್ಯದ ಮಾನದಂಡ?

ಇಮೇಜ್
ಜೂನ್ 17, 2020ರ 'ಪ್ರಜಾಪ್ರಗತಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಅನಿವಾರ್ಯತೆ ಹೌದೋ ಅಲ್ಲವೋ, ಅಂತೂ ಹೆಚ್ಚಿನ ಶಾಲಾ ಕಾಲೇಜುಗಳು ದಿನಕ್ಕೆ ಒಂದೆರಡು ಗಂಟೆಗಳಾದರೂ ಆನ್ಲೈನ್ ತರಗತಿ ನಡೆಸುವುದನ್ನು ಪ್ರಾರಂಭಿಸಿವೆ. ಎಲ್‌ಕೆಜಿಯ ಮಕ್ಕಳನ್ನೂ ಈ ಪ್ರಯೋಗ ಹೊರಗಿಟ್ಟಿಲ್ಲ. ಬೆಂಗಳೂರಿನ ಖಾಸಗಿ ವಿವಿಯೊಂದು ಪದವಿ ಪರೀಕ್ಷೆಗಳನ್ನೇ ಆನ್ಲೈನ್ ಮೂಲಕ ಮಾಡಿ ಮುಗಿಸಿರುವುದಾಗಿ ಘೋಷಿಸಿದೆ. ಮಕ್ಕಳ ಮೇಲಿನ ಪರಿಣಾಮ ಒಂದು ತೆರನಾದ್ದಾದರೆ ಶಿಕ್ಷಕವೃಂದದ ಮುಂದಿರುವ ಸವಾಲುಗಳೂ ಸಣ್ಣವಲ್ಲ. ಹೊಸತೊಂದು ವ್ಯವಸ್ಥೆಗೆ ಒಗ್ಗಿಕೊಳ್ಳಲೇಬೇಕಾದ ಸಂದಿಗ್ಧಕ್ಕೆ ಉಪನ್ಯಾಸಕ ವರ್ಗ ಶರಣಾಗಿದೆ. ನಾವು ನಾವಾಗಿಯೇ ಬದಲಾಗುವುದಕ್ಕೂ ಬೇರೆ ವಿಧಿಯಿಲ್ಲದೇ ಬದಲಾಗುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆಯಲ್ಲ? ಹಣ್ಣುಗಳನ್ನು ಬಲವಂತವಾಗಿ ಮಾಗಿಸುವ ಪ್ರಯತ್ನದಂತೆ ಮನಸ್ಸುಗಳನ್ನು ಮಾಗಿಸುವ ಪ್ರಯತ್ನ ಇದಾಗದೇ ಎಂಬುದೂ ಯೋಚಿಸಬೇಕಾದ ವಿಚಾರವೇ.  ಆರತಿ ಪಟ್ರಮೆ | ಪ್ರಜಾಪ್ರಗತಿ | 17-06-2020 ಇನ್ನೂ ಮುಗಿಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡರೆ ಈಗಿನ ಗೊಂದಲಮಯ ಪರಿಸ್ಥಿತಿಯಲ್ಲಿ ಮಕ್ಕಳು ಕಳೆದ ಶೈಕ್ಷಣಿಕ ವರ್ಷದುದ್ದಕ್ಕೂ ಕಲಿಸಿರುವುದನ್ನು ಮರೆತೇ ಹೋಗಿರಬಹುದೇನೋ ಎಂಬ ಅನುಮಾನವೂ ಒಂದೆಡೆ ಕಾಡುತ್ತದೆ. ಹಾಗಾಗಿ ಅಗತ್ಯ ಇರುವವರಿಗಾದರೂ ಪುನರ್ಮನನ ತರಗತಿಗಳನ್ನು ನಡೆಸುವುದು ಸೂಕ್ತವೆಂದು ಒ

ನೂರು ಮುಖ, ನೂರು ಬಗೆ, ಮೂರು ಗಾಲಿ ಸವಾರಿಗೆ...

ಇಮೇಜ್
[ಕೃಪೆ: ಪ್ರಜಾವಾಣಿ (ಮಂಗಳೂರು) ೨೪.೦೧. ೨೦೧೧] ಬಹುಶಃ ಪೇಟೆಯ ಬದುಕಲ್ಲಿ ನಮಗಿದು ಇತರ ಎಲ್ಲ ಅವಶ್ಯಕತೆಗಳ ಜತೆಗೆ ಬಹು ಮುಖ್ಯವಾಗಿ ಬೇಕಾದದ್ದು. ಸ್ಥಳ ಪರಿಚಯ ಇರುವಲ್ಲಿಗಾಗಲೀ, ಬರಿಯ ವಿಳಾಸವಷ್ಟೇ ಗೊತ್ತಿರುವಲ್ಲಿಗಾಗಲೀ ಎಲ್ಲಿಗೆ ಹೋಗಬೇಕಾದರೂ ನಮಗೆ ಸ್ವಂತ ವಾಹನವಿಲ್ಲವಾದಲ್ಲಿ ಇದೇ ಗತಿ. ಪೇಟೆಯ ಒಳಹೊರಗೆ ಎಲ್ಲೆಂದರಲ್ಲಿ ನೋಡಿದರೂ ಇದರ ಸಂಖ್ಯೆಯೂ ಬರೋಬ್ಬರಿ. ಅಂದರೂ ಯಾಕೋ ನಮಗೆ ಆಟೋರಿಕ್ಷಾಗಳೆಂದರೆ ಒಂದು ನಮೂನೆ ಸಸಾರ. ಎಲ್ಲರಿಗೂ ಬೇಕಾಗಿದ್ದರೂ ಬಳಸುವವರೆಲ್ಲರಿಂದ ದೂಷಣೆಗೊಳಗಾಗುವ ಸಾಮಾನ್ಯ ವಸ್ತುಗಳ ಪೈಕಿ ಆಟೋರಿಕ್ಷಾ ಗಳನ್ನೂ ಸೇರಿಸಬಹುದೇನೋ! ಈ ಆಟೋರಿಕ್ಷಾಗಳೂ ಅಷ್ಟೇ ಬಿಡಿ. ಬೈದಷ್ಟೂ ಬೈಸಿಕೊಳ್ಳುತ್ತವೆ, ಯಾವುದೇ ಮುಲಾಜಿಲ್ಲದೆ. ಹೆಚ್ಚಿನಂಶ ಯಾವಾಗಲೂ ಬೈಸಿಕೊಂಡು ಅದೇ ರೂಢಿಯಾಗಿರಬೇಕು. ಯಾರೇನೇ ಅಂದರೂ ಕ್ಯಾರೇ ಮಾಡದೇ ತಮ್ಮ ಪಾಡಿಗೆ ತಾವು ನುಸುಳಿಕೊಂಡು ಸಾಗುತ್ತಲೇ ಇರುತ್ತವೆ ಪೇಟೆಯುದ್ದಗಲಕ್ಕೂ. ಅತ್ತಲಿಂದ ಬಸ್ಸು ಬರಲಿ, ಇತ್ತಲಿಂದ ಲಾರಿ ಬರಲಿ, ಎದುರಿಂದ ಕಾರು ಬರಲಿ, ಹಿಂದಿನಿಂದ ಬೈಕು ಬರಲಿ ಇವು ಯಾರನ್ನೂ ಗಣ್ಯ ಮಾಡದೇ ಮುನ್ನುಗ್ಗುತ್ತಿರುತ್ತವೆ. ಎಲ್ಲಿ ಯಾವುದು ಢೀ ಕೊಟ್ಟೀತೋ ಹಿಂದಿನಿಂದ ಬಂದು ಹೊಡೆದೀತೋ ಎಂಬಿತ್ಯಾದಿಗಳ ಬಗ್ಗೆ ಯಾವುದೇ ಗಮನವಿಲ್ಲದೆ ಸಾಗುತ್ತಲೇ ಇರುತ್ತವೆ; ಮನೆಯೊಳಗೆ ಸದಾ ಗುಲ್ಲೆಬ್ಬಿಸುತ್ತಿರುವ ಸಣ್ಣ ಮಕ್ಕಳ ಹಾಗೆ. ಯಾವ ಊರಿನಲ್ಲೇ ಆಗಲಿ, ನೀವು ಗಮನಿಸಿ ನೋಡಿ, ರಿಕ್ಷಾಗಳು ಓಡುವುದು ಒಂದೇ

ಶಿರಸ್ತ್ರಾಣ ಪುರಾಣ... ನೂರೆಂಟು ಕಾರಣ...

ಇಮೇಜ್
[ಕೃಪೆ: ಪ್ರಜಾವಾಣಿ (ಮಂಗಳೂರು) ಜನವರಿ ೧೭, ೨೦೧೧] ಮಂಗಳೂರಿಗೆ ಬಂದ ಹೊಸತು. ಇಲ್ಲಿನ ವಾಹನ ದಟ್ಟಣೆಗೇ ಅರ್ಧ ಧೈರ್ಯಗುಂದಿದ್ದ ನನಗೆ ಬೈಕ್ ಸವಾರರೆಲ್ಲಾ ಮುಖವೇ ಗುರ್ತು ಸಿಗದ ನಮೂನೆಯಲ್ಲಿ ಹೆಲ್ಮೆಟ್ಟು ಧರಿಸಿ ಹೋಗುವುದನ್ನು ನೋಡುವಾಗ ಯಾಕೋ ಅವ್ಯಕ್ತ ಭಯ; ಸಣ್ಣಗೆ ಕೈಕಾಲು ನಡುಕ. ಅದು ಸಾಲದ್ದಕ್ಕೆ ಆ ಥರ ಹೆಲ್ಮೆಟ್ಟು ಹಾಕ್ಕೊಂಡವರು ಯಾರಾದರೂ ಹಾಯ್ ಬಾಯ್ ಮಾಡಿ ಹೋದರೆ ಕೇಳುವುದೇ ಬೇಡ. ಇಡೀ ದಿನ ಅದ್ಯಾರಾಗಿರಬಹುದಪ್ಪಾ ಅನ್ನುವ ಯೋಚನೆ. ಪರಿಚಯ ಇದ್ದವರೇಯಾ ಅಥವಾ ಯಾರೋ ಸುಮ್ಮನೆ ಕೀಟಲೆಗೆ ಅಂತ ಬಾಯ್ ಮಾಡಿ ಹೋದರಾ ಅನ್ನುವ ಕಿರಿಕಿರಿ. ಇದೇ ಮನಸ್ಥಿತಿಯಲ್ಲಿರಬೇಕಾದರೆ ಒಂದಿನ ತರಾತುರಿಯಲ್ಲಿ ಕಾಲೇಜಿಗೆ ಹೊರಟಿದ್ದೆ. ಬಸ್ಟಾಂಡಿನ ಹತ್ತಿರ ತಲುಪಬೇಕು ಅನ್ನುವಷ್ಟರಲ್ಲಿ ಭರ್ರನೇ ಬಂದ ಬೈಕೊಂದು ನನ್ನ ಹತ್ತಿರ ನಿಂತಿತು. ಹೆಲ್ಮೆಟ್ಟಿನೊಳಗಿಂದ ಬಾಯಿ ಕೊಂಚವೇ ಅಲುಗಾಡಿದ್ದು ಕಂಡಿತು ವಿನಾ ಅದ್ಯಾರೋ ಏನು ಹೇಳಿದರೋ ಒಂದೂ ಅರ್ಥವಾಗಲಿಲ್ಲ. ನನ್ನ ಕಳವಳ ನಿಯಂತ್ರಣ ಮೀರಿ ’ಯಾರು, ಯಾರು ನೀವು?’ ಅಂತ ತೊದಲಿದೆ. ಅಷ್ಟರಲ್ಲಾಗಲೇ ಆ ವ್ಯಕ್ತಿಗೂ ನನ್ನ ಹೆದರಿಕೆ ಅರ್ಥವಾದಂತೆ ಹೆಲ್ಮೆಟ್ಟು ತೆಗೆದು ’ಎಂಥ ಮೇಡಮ್ ನೀವು? ಹೆದರಿಕೊಳ್ತೀರಿ? ನಾನು ನಿಮ್ಮ ಸ್ಟೂಡೆಂಟ್ ಅಲ್ವಾ?’ ಅಂತ ನಕ್ಕ. ’ಅಲ್ಲ ಮಾರಾಯಾ, ಮುಖವೇ ಕಾಣದಿರುವಾಗ ನೀನು ಯಾರು ಅಂತ ನಂಗೇನು ಗೊತ್ತಾಗಬೇಕು? ನಿನ್ನದೊಳ್ಳೇ ಕಥೆ.’ ಅಂದು ಮುಂದೆ ಹೋದೆ. ಬಸ್ಸು ಹತ್ತಿ ಕಾಲೇಜಿಗೆ ತಲುಪುವಷ್ಟರಲ್

ಪುರುಸೊತ್ತಾಗುವ ಹೊತ್ತು

ಅಜ್ಜಿ ತೀರಾ ಅನಾರೋಗ್ಯದಿಂದ ಬಳಲಿದ್ದರು. ಅವರಿವರನ್ನೆಲ್ಲ ನೋಡಬೇಕು ಅಂತ ಹಂಬಲಿಸಿ ಅಳುತ್ತಿದ್ದರು. ಏಳು ಮಂದಿ ಮಕ್ಕಳ ಪೈಕಿ ನಾಲ್ಕು ಜನ, ಇಪ್ಪತ್ತೊಂದು ಮಂದಿ ಮೊಮ್ಮಕ್ಕಳಲ್ಲಿ ಒಂದಿಬ್ಬರು ಹೋಗಿ ನೋಡಿ ಬಂದರು. ಎಲ್ಲರಿಗೂ ಅವರವರ ಕೆಲಸ; ಬಿಡುವಿಲ್ಲದ ದುಡಿಮೆ. ಅಯ್ಯೋ, ನೀ ಗ್ರೇಶಿದ ಹಾಗೆಲ್ಲ ಬರುವುದಕ್ಕೆ ನಮಗೆಂತ ಕೆಲಸ ಇಲ್ವಾ ಅಜ್ಜಿ ಅಂತ ಮನಸ್ಸಲ್ಲೇ ರೇಗಿದರು ಎಲ್ಲರೂ. ತಿಂಗಳಿಗೆ ಒಂದಿರುವ ಕ್ಯಾಶುವಲ್ ಲೀವ್ ಸುಮ್ಮನೇ ಅಜ್ಜೀನ ನೋಡಿ ಬರ್ಬೇಕು ಅಂತ ತೆಗಿಲಿಕ್ಕಾಗ್ತದಾ ಅಂತ ನಮ್ಮೊಳಗೇ ಎಗರಾಡಿಕೊಂಡೆವು. ಅಬ್ಬೆಗೆಂಥಾ ಮರ್ಲು, ಯಾವಾಗ್ಲೂ ಇರುವ ಮಕ್ಕಳು ಮೊಮ್ಮಕ್ಕಳೆಲ್ಲ ಹತ್ತಿರ ಬರ್ಲಿ ಅಂತ ಆಶೆ ಪಡುವುದು? ಅದೆಂಥಾ ಆಗುವ ಹೋಗುವ ಕೆಲಸವಾ? ಅಂತ ಗುರುಗುಟ್ಟಿಕೊಂಡೆವು. ಒಂದಿನ ಅಜ್ಜಿ ಸಡನ್ನಾಗಿ ತೀರಿಕೊಂಡರು. ಎಲ್ಲರೂ ತರಾತುರಿಯಲ್ಲಿ ರಜೆ ಗೀಚಿ ಅಂತ್ಯಕ್ರಿಯೆಗೆ ಧಾವಿಸಿದೆವು. ಅಜ್ಜಿ ಬಯಸಿದ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳೆಲ್ಲ ಅಲ್ಲಿ ಜಮೆಯಾಗಿದ್ದೆವು. ಅದ ನೋಡುವುದಕ್ಕೆ ಮಾತ್ರ ಅಜ್ಜಿ ಕಣ್ತೆರೆಯಲಿಲ್ಲ...

ಪೇಟೆ ಮನೆಗಳ ಗ್ಯಾಸ್ ಪುರಾಣವು...

ಗ್ಯಾಸ್ ಸಿಲಿಂಡರುಗಳೆಲ್ಲ ಒಂದಕ್ಕೊಂದು ತಾಂಟಿಕೊಂಡು ಠೇಂಕರಿಸುತ್ತಾ ದೂರದಲ್ಲೆಲ್ಲೋ ಪಿಕಪ್ ಟೆಂಪೋ ವೊಯ್ಯನೆ ಬರುವಾಗ ಮನೆಯೊಡತಿಯ ಮನದಲ್ಲಿ ಹೇಳತೀರದ ಸಂಭ್ರಮ. ಹ್ಞಾಂ... ಇವತ್ತಂತೂ ಖಂಡಿತ ನಮ್ಮ ಮನೆಗೆ. ಬುಕ್ಕು ಮಾಡಿ ದಿನ ಹತ್ತಾಯ್ತು. ಯಾವಾಗಲೂ ಎಂಟು ದಿನಕ್ಕೇ ತರ್ತಾರವ್ರು. ಈ ಸರ್ತಿ ಏನಾಯ್ತೋ, ಸಿಕ್ಕಾಪಟ್ಟೆ ಲೇಟು... ಯೋಚನೆಗಳು ತಲೆಯೊಳಗೆ ಸರಸರ... ಆ ಟೆಂಪೋ ಸಿಲಿಂಡರಿನ ಅದೇ ಸದ್ದಿನೊಂದಿಗೆ ಗೇಟಿನೆದುರಿಂದ ಪಾಸಾಗಿ ಬೇರೊಂದು ಮನೆಯೆದುರು ನಿಲ್ಲಬೇಕಾದರೆ ಈಕೆಗೋ ಅಸಾಧ್ಯ ನಿರಾಸೆ. ಉಸಿರಿಗಾಗಿ ಹಂಬಲಿಸುತ್ತಿದ್ದವನಿಗೆ ಆಮ್ಲಜನಕ ತುಂಬಿದ ಸಿಲಿಂಡರನ್ನು ದೂರದಿಂದ ತೋರಿಸಿ ಹಾಗೆಯೇ ಮರೆಯಾಗಿಸಿದರೆ ಎಂತಹ ನಿರಾಸೆಯಾಗಬಹುದೋ ಆ ಬಗೆಯದೇ ಬೇಜಾರು. ದೇವರೇ... ಈಗಿರುವ ಹಂಡೆ ಇನ್ನೆರಡು ದಿನಕ್ಕಾದರೂ ಬರಲಿ ಎಂಬ ಪ್ರಾರ್ಥನೆ. ಕಣ್ಣುಗಳು ಅಪ್ರಯತ್ನವಾಗಿ ದೇವರ ಫೋಟೋ ನೋಡುತ್ತವೆ. "ನಿಮಗೆ ಏನು, ಅಡುಗೆ ಮಾಡಬೇಕಾದರೆ ಒಲೆ ಉರಿಸಬೇಕಾದ ತಾಪತ್ರಯವೇ ಇಲ್ಲ. ಸ್ಟವ್ ಆನ್ ಮಾಡಿ ಲೈಟರ್‌ನಲ್ಲಿ ಟಕ್ ಮಾಡಿದ್ರಾಯ್ತು. ನಮ್ಮ ಹಾಗೆ ಮಡಲು, ಕಟ್ಟಿಗೆ ಅಂತೆಲ್ಲ ಒದ್ದಾಡಬೇಕಿಲ್ಲ. ಎಷ್ಟು ಲಾಯಕ್ಕು! ನಮ್ಮ ಅವಸ್ಥೆ ಮಳೆಗಾಲದಲ್ಲಂತೂ ಕೇಳುದೇ ಬೇಡ. ಸೌದೆ ಓಶಿದಲ್ಲೇ ಧೋ ಅಂತ ಮಳೆ ನೀರು ಸೋರಿ ಕಟ್ಟಿಗೆ ಪೂರಾ ಒದ್ದೆಯಾಗಿ... ಥೋ... ಜೀವಮಾನ ಪೂರಾ ಒಲೆ ಉರಿಸುವುದರಲ್ಲೇ ಕಳೆಯಿತೋ ಅನ್ನಿಸ್ತದೆ ಮಾರಾಯ್ತಿ. ಆ ಹೊಗೆ, ಕಣ್ಣುರಿ, ಕೆಮ್ಮು, ಯಾರಿಗೆ ಬೇಕ